ಪೀರಾಮಲ್ ಫೈನಾನ್ಸ್ನ ಎಮ್ಎಸ್ಎಮ್ಇ ಸಾಲಗಳಿಗಾಗಿ ಕಂತಿನ ಕ್ಯಾಲ್ಕುಲೇಟರ್ಗೆ ಸಂಬಂಧಪಟ್ಟಂತೆ ಹಲವಾರು ಉಪಯುಕ್ತತೆಗಳಿವೆ. ಇವುಗಳಲ್ಲಿ ತೀರಾ ಸಾಮಾನ್ಯವಾದ ಕೆಲವು ಈ ಕೆಳಗಿನಂತಿವೆ :
ಕಂತುಗಳು ಮತ್ತು ವ್ಯಾಪಾರ ಸಾಲದ ಬಡ್ಡಿಯ ದರದ ಮೇಲೆ ವಾಸ್ತವಿಕವಾಗಿ ಪ್ರಭಾವ ಬೀರುವ ಕೆಲವೊಂದು ಕಾರಣಗಳು ಈ ಕೆಳಗಿನಂತಿವೆ :
ನೀವು ಪಡೆಯುವ ಸಾಲದ ಮೊಬಲಗು ನೀವು ನೀಡಬೇಕಾಗುವ ಕಂತಿನ ಮೇಲೆ ಗಮನೀಯವಾಗಿ ಅವಲಂಬಿಸುತ್ತದೆ ಎಂಬ ವಿಷಯ ನಿಮಗೆ ತಿಳಿದಿರಬೇಕು. ಸಾಲದ ಮೊಬಲಗು ಹೆಚ್ಚಾದಾಗ ನಿಮ್ಮ ಕಂತಿನ ಮೊಬಲಗು ಮೇಲಕ್ಕೇರುತ್ತದೆ. ಅದೇ ಸಾಲ ಕಡಿಮೆ ಇದ್ದರೆ ಕಂತು ಕೂಡ ಕಡಿಮೆಯಾಗುತ್ತದೆ. ಇಷ್ಟಲ್ಲದೆ ವ್ಯಾಪಾರ ಸಾಲದ ಕಂತುಗಳು ಆಂಶಿಕವಾಗಿ ಮರುಪಾವತಿಯ ಕಾಲಾವಧಿಯನ್ನೂ ಅವಲಂಬಿಸುತ್ತದೆ.
ಎಲ್ಲಕ್ಕೂ ಮಿಗಿಲಾಗಿ ಬಡ್ಡಿಯ ದರವು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ, ವಿಶೇಷವಾಗಿ ವ್ಯಾಪಾರ ಸಾಲದ ಕಂತುಗಳನ್ನು ನಿರ್ಧರಿಸುವಾಗ. ವಿಭಿನ್ನ ಸಾಲ ನೀಡುವವರು ನೀಡುವ ಸಾಲದ ಆಯ್ಕೆಗಳ ತುಲನೆ ಮಾಡಿ ಇದನ್ನು ಆರಿಸಲಾಗುತ್ತದೆ. ಬಡ್ಡಿಯ ದರ ಕಡಿಮೆ ಇದೆ ಎಂಬ ಮಾತ್ರಕ್ಕೆ ಅದನ್ನು ನೀವು ಎಂದೂ ಆರಿಸಬಾರದು, ಅದರಲ್ಲಿ ಅಡಗಿರುವ ವೆಚ್ಚಗಳು ಏನಿವೆ ಎಂದು ಚೆನ್ನಾಗಿ ಪರಿಶೀಲಿಸಿಕೊಳ್ಳಬೇಕು. ವ್ಯಾಪಾರ ಸಾಲಕ್ಕಾಗಿ ಅರ್ಜಿ ಮಾಡುವಾಗ ಅದರ ನಿಯಮ ಹಾಗೂ ಷರತ್ತುಗಳನ್ನು ಕೂಡ ನೀವು ಪರಿಗಣಿಸಬೇಕು.
ಸಾಲದ ಅವಧಿ ಅಥವಾ ಸಾಲ ಮರುಪಾವತಿಯ ಕಾಲಾವಧಿ ಕೂಡ ವ್ಯಾಪಾರ ಸಾಲದ ಕಂತುಗಳ ಲೆಕ್ಕಾಚಾರದಲ್ಲಿ ಮುಖ್ಯವಾದ ಪಾತ್ರ ನಿರ್ವಹಿಸುತ್ತದೆ. ಸಾಲದ ಅವಧಿ ಎಷ್ಟು ಹೆಚ್ಚಿರುತ್ತದೋ ಅದಕ್ಕೆ ಸರಿಯಾಗಿ ಕಂತಿನ ಮೊಬಲಗು ಕಡಿಮೆ ಇರುತ್ತದೆ. ಅದೇ ರೀತಿ ಅವಧಿ ಕಡಿಮೆ ಇರುವಾಗ ಕಂತಿನ ಹಣ ಹೆಚ್ಚಾಗುತ್ತದೆ.
ಎಮ್ಎಸ್ಎಮ್ಇ ಸಾಲದ ಕಂತಿನ ಕ್ಯಾಲ್ಕುಲೇಟರ್ ಸಾಲದ ಮೇಲಿನ ಕಂತಿನ ಮೊಬಲಗನ್ನು ಲೆಕ್ಕಮಾಡಲು “ಕಡಿಮೆಯಾಗುತ್ತಿರುವ ಬ್ಯಾಲೆಂಸ್” ಪದ್ದತಿಯನ್ನು ಬಳಸಿಕೊಳ್ಳುತ್ತದೆ. ಬಳಕೆದಾರರು ಒದಗಿಸಿದ ಮಾಹಿತಿಯನ್ನು ಬಳಸಿಕೊಂಡು ಇದು ಸಂದಾಯ ಮಾಡಬೇಕಾಗುವ ಬಡ್ಡಿಯನ್ನು ಕೂಡ ಪರಿಗಣಿಸುತ್ತದೆ. ಕೆಲವೊಮ್ಮೆ ದಾಖಲೀಕರಣ ಚಾರ್ಜ್, ಪ್ರಕ್ರಿಯೆಯ ಶುಲ್ಕ, ಮತ್ತು ಇತರವುಗಳೊಂದಿಗೆ ಅತಿರಿಕ್ತ ಚಾರ್ಜ್ಗಳನ್ನು ಕೇಳಿ ಪಡೆಯಲಾಗುತ್ತದೆ. ನೆನಪಿರಲಿ, ಈ ಅತಿರಿಕ್ತ ಚಾರ್ಜ್ಗಳು ಕೆಲವೊಂದು ಸಂದರ್ಭಗಳಲ್ಲಿ ಮಾತ್ರ ಅನ್ವಯಿಸುವುದರಿಂದ ಕ್ಯಾಲ್ಕುಲೇಟರ್ ಇದನ್ನು ಯಾವಾಗಲೂ ಪರಿಗಣಿಸುವುದಿಲ್ಲ.
ಹೊಸ ವ್ಯಾಪಾರಗಳು ಎಮ್ಎಸ್ಎಮ್ಇ ಸಾಲವನ್ನು ನಿಶ್ಚಿತವಾಗಿ ಪಡೆಯಬಹುದು ಮತ್ತು ಗರಿಷ್ಠ ಲಾಭವನ್ನು ಪಡೆಯಬಹುದು. ಎಮ್ಎಸ್ಎಮ್ಇ ಸಾಲಗಳು ಮೂಲಧನ ವೃದ್ಧಿಗಾಗಿ ಧನ ಸಹಾಯ ನೀಡುತ್ತಿದ್ದು ಇದನ್ನು ನೀವು ನಿಮ್ಮ ಯಾವುದೇ ಪ್ರಕಾರದ ವ್ಯಾಪಾರಕ್ಕಾಗಿ ಸುಲಭವಾಗಿ ಬಳಸಿಕೊಳ್ಳಬಹುದು. ಆದ್ದರಿಂದ, ನೀವು ಹೊಸ ವ್ಯಾಪಾರವನ್ನು ಆರಂಭಿಸಲು ಯೋಜಿಸುತ್ತಿದ್ದರೆ, ನೀವು ಸುಲಭದಲ್ಲಿ ಎಮ್ಎಸ್ಎಮ್ಇ ಸಾಲವನ್ನು ಪಡೆಯಬಹುದು.
ವಾಣಿಜ್ಯ ಸಾಲಕ್ಕಾಗಿ ಕಂತಿನ ಲೆಕ್ಕ ಮಾಡಲು ನೀವು ಎಮ್ಎಸ್ಎಮ್ಇ ಸಾಲದ ಕ್ಯಾಲ್ಕುಲೇಟರನ್ನು ಬಳಸಬಹುದು. ಇಷ್ಟಲ್ಲದೆ, ವಾಣಿಜ್ಯ ಸಾಲದ ಕಂತಿನ ಲೆಕ್ಕ ಮಾಡಲು ನೀವು ಗಣಿತದ ಸೂತ್ರವನ್ನು ಕೂಡ ಬಳಸಬಹುದು. ಈ ಸೂತ್ರವು ಈ ಕೆಳಗಿನಂತಿದೆ :
E = P * R * (1+R)^N / ((1+R)^N-1)
ಇಲ್ಲಿ,
E ಅಂದರೆ ಇಎಮ್ಐ ಅಥವಾ ಕಂತು
P ಅಂದರೆ ಪಡೆದ ಸಾಲದ ಮೂಲಧನ
N ಅಂದರೆ ಸಾಲದ ಅವಧಿ ತಿಂಗಳುಗಳಲ್ಲಿ
R ಅಂದರೆ ಬಡ್ಡಿಯ ದರ
ಹೌದು. ವ್ಯಾಪಾರ ಸಾಲದ ಮೇಲಿನ ಕಂತಿನ ಹಣವನ್ನು ಕೆಲವೊಂದು ಸಂದರ್ಭಗಳಲ್ಲಿ ಉದ್ದೇಶಪೂರ್ವಕವಾಗಿ ಕಡಿಮೆ ಮಾಡುವುದು ಸಾಧ್ಯವಿದೆ. ವ್ಯಾಪಾರ ಸಾಲದ ಮೇಲಿನ ಇಕ್ವೇಟೆಡ್ ಮಂಥ್ಲಿ ಇನ್ಸ್ಟಾಲ್ಮೆಂಟ್ ಅಥವಾ ಕಂತನ್ನು ಕಡಿಮೆ ಮಾಡಲು ಈ ಕೆಳಗಿನ ಮಾರ್ಗಗಳು ಸಹಾಯ ಮಾಡಬಲ್ಲವು :
ನೀವು ಹೊಸ ವ್ಯಾಪಾರವನ್ನು ಆರಂಭಿಸುತ್ತಿದ್ದರೆ, ಸುಲಭದಲ್ಲೇ ನಿಮಗೆ ಎಮ್ಎಸ್ಎಮ್ಇ ಸಾಲ ದೊರಕುತ್ತದೆ. ಆದರೂ ನೀವು ನಿಮ್ಮ ಸಾಲದ ಅರ್ಹತೆಯನ್ನು ಪರಿಶೀಲಿಸಲು ಎಮ್ಎಸ್ಎಮ್ಇ ಸಾಲದ ಅರ್ಹತೆಯ ಕ್ಯಾಲ್ಕುಲೇಟರ್ ಬಳಸಿಕೊಳ್ಳಬಹುದು.
ಎಮ್ಎಸ್ಎಮ್ ಇ ಸಾಲವನ್ನು ನೀವು ನಿಸ್ಸಂದೇಹವಾಗಿ ಹೊಸ ವ್ಯಾಪಾರಕ್ಕಾಗಿ ಬಳಸಿಕೊಳ್ಳಬಹುದು ಮತ್ತು ಅದರಿಂದ ಲಾಭವನ್ನು ಪಡೆಯಬಹುದು. ಇಷ್ಟಲ್ಲದೆ, ಎಮ್ಎಸ್ಎಮ್ಇ ಸಾಲಗಳು ಮೂಲಧನ ವೃದ್ಧಿಗಾಗಿಯೂ ಆರ್ಥಿಕ ಸಹಾಯ ನೀಡುತ್ತಿರುವುದರಿಂದ ಇವನ್ನು ಯಾವುದೇ ಪ್ರಕಾರದ ವ್ಯಾಪಾರ ಅವಶ್ಯಕತೆಗಳಿಗೆ ಬಳಸಿಕೊಳ್ಳಬಹುದು.
ವ್ಯಾಪಾರ ಸಾಲದ ಕಂತುಗಳು ಇದ್ದಂತೆಯೇ ಇರುತ್ತವೆಯಲ್ಲದೆ ಭವಿಷ್ಯದಲ್ಲಿ ಬದಲಾಗುವುದಿಲ್ಲ. ಇದಕ್ಕೆ ಕಾರಣ ನಿಮ್ಮ ಸಾಲದ ಮೊಬಲಗು, ಸಾಲದ ಅವಧಿ ಮತ್ತು ಬಡ್ಡಿಯ ದರಗಳನ್ನು ಲಾಕ್ ಮಾಡಲಾಗಿರುತ್ತದೆ. ಆದ್ದರಿಂದ ಕಂತಿನಲ್ಲಿ ಪರಿವರ್ತನೆಯಾಗಲಾರದು. ಆದರೆ, ಭಾರತ ಸರಕಾರವು ಬಡ್ಡಿಯ ದರದಲ್ಲಿ ಹೆಚ್ಚು-ಕಡಿಮೆ ಮಾಡಲು ಬಯಸಿದರೆ ಅದಕ್ಕಾಗಿ ಪೂರ್ತಿ ಅಧಿಕಾರವನ್ನು ಹೊಂದಿರುತ್ತದೆ.
ನಿಮ್ಮ ಇಸಿಎಸ್ ಬೌಂಸ್ ಆದರೆ ಅಥವಾ ನೀವು ವ್ಯಾಪಾರ ಸಾಲದ ಕಂತನ್ನು ಕಟ್ಟಲು ತಪ್ಪಿದರೆ, ನೀವು ಜುರ್ಮಾನೆ ತೆರಬೇಕಾಗುತ್ತದೆ. ನೀವು ತೆರಬೇಕಾಗುವ ಜುರ್ಮಾನೆಯು ಬೌಂಸ್ ಆದ ಚೆಕ್ನ ಮೌಲ್ಯಕ್ಕೆ ಸಮಾನವಾಗಿರುತ್ತದೆ. ಇದರೆ ಈ ಮೊತ್ತವು ರೂ. 750 ಅಥವಾ ಅದಕ್ಕಿಂತ ಹೆಚ್ಚು ಕೂಡ ಇರಬಹುದು.
ನೆನಪಿರಲಿ, ಇಸಿಎಸ್ನ್ನು ನಿಮ್ಮ ಬ್ಯಾಂಕ್ ಅಥವಾ ಆರ್ಥಿಕ ಸಂಸ್ಥೆ ನಿರ್ವಹಿಸುತ್ತದೆ. ಸಾಕಷ್ಟು ಹಣ ಖಾತೆಯಲ್ಲಿ ಇಲ್ಲದಿರುವ ಕಾರಣಕ್ಕಾಗಿ ಇಸಿಎಸ್ ಬೌಂಸ್ ಆದರೆ, ಕೆಲವು ದಿನಗಳ ನಂತರ ಬ್ಯಾಂಕ್ ಅದಕ್ಕಾಗಿ ಮರಳಿ ಪ್ರಯತ್ನಿಸುವುದು ಸಾಧ್ಯವಿದೆ.
ಹೌದು. ನಿಮ್ಮ ಸಾಲದ ಅವಧಿಯು ಉದ್ದೇಶಪೂರ್ವಕವಾಗಿ ನಿಮ್ಮ ವ್ಯಾಪಾರ ಸಾಲದ ಕಂತಿನ ಮೇಲೆ ಪ್ರಭಾವ ಬೀರುತ್ತದೆ. ಅಲ್ಲದೆ, ನಿಮ್ಮ ಸಾಲಕ್ಕಾಗಿ ತಗಲಿಸಲಾಗುವ ಬಡ್ಡಿಯ ಮಾದರಿಯನ್ನು ಅವಲಂಬಿಸಿ, ನಿಮ್ಮ ಕಂತಿನಲ್ಲಿ ಬಡ್ಡಿಯ ಅಂಶವೂ ಬದಲಾಗುತ್ತದೆ. ನೀವು ಗಮನಿಸಬೇಕಾದ ಸಂಗತಿ ಎಂದರೆ, ಕಡಿಮೆಯಾಗುತ್ತಿರುವ ತುಲನಾತ್ಮಕವಾಗಿ ಕಂತಿನ ಮೊಬಲಗನ್ನು ಕಡಿಮೆ ಮಾಡುತ್ತದೆ. ಅದೇ ಸಮಯ, ಬಡ್ಡಿಯ ದರ ಒಂದೇ ಸಮಾನವಾಗಿರುವಾಗ ನೀವು ಹೆಚ್ಚು ಹಣವನ್ನು ಕಂತಿನಲ್ಲಿ ನೀಡುವಿರಿ.
ಆದ್ದರಿಂದ, ಒಟ್ಟಿನಲ್ಲಿ ಹೇಳುವುದಾದರೆ, ಮರುಪಾವತಿಯ ಅವಧಿಯು ಉದ್ದೇಶಪೂರ್ವಕವಾಗಿ ವ್ಯಾಪಾರ ಸಾಲದ ಕಂತಿನ ಮೊಬಲಗಿನ ಮೇಲೆ ಪರಿಣಾಮ ಬೀರುತ್ತದೆ. ನೀವು ಬೇಕಾದರೆ ಕಡಿಮೆ ಅವಧಿಯನ್ನು ಬಯಸಿರಿ ಅಥವಾ ದೀರ್ಘ ಅವಧಿ, ಎರಡೂ ಸಂದರ್ಭಗಳಲ್ಲಿ ಕಂತಿನ ಮೊಬಲಗಿನ ಮೇಲೆ ಪ್ರಭಾವ ಆಗಿಯೇ ಆಗುತ್ತದೆ.
ಕೆಲವೊಂದು ಸಂದರ್ಭಗಳಲ್ಲಿ ವ್ಯಾಪಾರ ಸಾಲದಲ್ಲೂ ಆಂಶಿಕ ಮರುಪಾವತಿಗೆ ಅವಕಾಶವಿದೆ. ಪೀರಾಮಲ್ ಫೈನಾನ್ಸ್ನಲ್ಲಿ ನಾವು ಮರುಪಾವತಿಗೆ ಅತಿರಿಕ್ತ ತೆರಿಗೆ ಸಹಿತ ಮೂಲ ಮೊಬಲಗಿನ 5% ವರೆಗೆ ಚಾರ್ಜ್ ಮಾಡುತ್ತೇವೆ. ಆಂಶಿಕ ಪಾವತಿಯ ಚಾರ್ಜ್ನ ಹೊರತಾಗಿ ಇದಕ್ಕೆ ಜಿಎಸ್ಟಿ ಕೂಡ ಅನ್ವಯಿಸುತ್ತದೆ. ಆದರೆ ಇದು ಸಾಲದ ನಿಯಮ ಹಾಗೂ ಷರತ್ತುಗಳಿಗೆ ಪೂರ್ತಿಯಾಗಿ ಬದ್ಧವಾಗಿರುತ್ತದೆ.
ಹೌದು. ವ್ಯಾಪಾರ ಸಾಲಗಳನ್ನು ಅವಧಿಯ ಮೊದಲೇ ಮುಕ್ತಾಯಗೊಳಿಸಿದರೆ ಕೆಲವೊಮ್ಮೆ ಮುಂದಾಗಿ ಮುಕ್ತಾಯದ ಚಾರ್ಜ್ ಮಾಡಲಾಗುತ್ತದೆ. ನಿಜವೆಂದರೆ, ವ್ಯಾಪಾರ ಸಾಲಗಳನ್ನು ಸಾಲದ ಅವಧಿಯಲ್ಲಿ ಯಾವಾಗ ಬೇಕಾದರೂ ಮುಕ್ತಾಯಗೊಳಿಸಲು ಅವಕಾಶವಿದೆ.
ನೀವು ಗಮನಿಸಬೇಕಾದ ವಿಷಯವೆಂದರೆ, ಸಾಲದ ಒಪ್ಪಂದದ ದಿನಾಂಕದಿಂದ 12 ತಿಂಗಳ ಒಳಗೆ ಸಾಲವನ್ನು ಮುಕ್ತಾಯಗೊಳಿಸಿದರೆ, 6% ಮುಂದಾಗಿ ಮುಕ್ತಾಯ ಚಾರ್ಜ್ ಹೇರಲಾಗುತ್ತದೆ. ಅದೇ ಸಾಲದ ಒಪ್ಪಂದದ ತಾರೀಖಿನಿಂದ 12 ತಿಂಗಳ ನಂತರ ಸಾಲವನ್ನು ಮುಂದಾಗಿ ಮುಕ್ತಾಯಗೊಳಿಸಿದರೆ 5% ಚಾರ್ಜ್ ಮಾಡಲಾಗುತ್ತದೆ. ಇದು ಸಾಮಾನ್ಯವಾಗಿ ಬಾಕಿ ಇರುವ ಸಾಲದ ಮೂಲ ಮೊಬಲಗಿನ ಮೇಲೆ ಆಧಾರಿತವಾಗಿರುತ್ತದೆ.
ವ್ಯಾಪಾರದ ವೆಚ್ಚಗಳಿಗಾಗಿ ಕಂತಿನ ಲೆಕ್ಕಾಚಾರವು ನೀವೆಷ್ಟು ವ್ಯಾಪಾರ ಸಾಲವನ್ನು ಪಡೆಯಬೇಕು ಎಂಬುದನ್ನು ನಿರ್ಧರಿಸುತ್ತದೆ. ಅಲ್ಲದೆ ವ್ಯಾಪಾರ ಸಾಲದ ಕಂತಿನ ಕ್ಯಾಲ್ಕುಲೇಟರ್ನ ಸಹಾಯದಿಂದ ನೀವು ನಿಮ್ಮ ವ್ಯಾಪಾರ ಸಾಲದ ಮೇಲಿನ ಕಂತಿನ ಮೊಬಲಗನ್ನು ಸುಲಭದಲ್ಲಿ ಲೆಕ್ಕ ಮಾಡಬಹುದು.
ವ್ಯಾಪಾರ ಸಾಲಕ್ಕಾಗಿ ಆಮೂರ್ತೀಕರಣ ಅನುಸೂಚಿಯು ನಿಯತಕಾಲಿತ ಮಿಶ್ರಣದ ಸಾಲ ಮರುಪಾವತಿಗಳ ಒಂದು ಸಂಪೂರ್ಣ ತಾಲಿಕೆಯಾಗಿರುತ್ತದೆ. ಇದು ಪ್ರತಿ ಪಾವತಿಯಲ್ಲಿ ಮೂಲಧನವೆಷ್ಟು ಮತ್ತು ಬಡ್ಡಿ ಎಷ್ಟು ಸೇರಿದೆ ಎಂಬುದನ್ನು ಅನನ್ಯವಾಗಿ ತೋರಿಸುತ್ತದೆ. ಸಾಲದ ಅವಧಿಯ ಅಂತ್ಯಕ್ಕೆ ಸರಿಯಾಗಿ ಸಾಲದ ಮೊಬಲಗನ್ನು ತೀರಿಸುವುದನ್ನು ತೋರಿಸಲಿಕ್ಕಾಗಿ ಇದನ್ನು ನೀಡಲಾಗುತ್ತದೆ.