ಮೈಕ್ರೋಫೈನಾನ್ಸ್ ಸಾಲವನ್ನು ಮನೆಯ ವಾರ್ಷಿಕ ಆದಾಯ ರೂ. 3,00,000ದ ವರೆಗೆ ಇರುವ ಕುಟುಂಬಗಳಿಗೆ ಅಡವು ಇಲ್ಲದೆ ಕೊಡುವ ಸಾಲ ಎಂದು ವ್ಯಾಖ್ಯಾನಿಸಲಾಗುತ್ತದೆ. ಈ ಉದ್ದೇಶಕ್ಕಾಗಿ, ಮನೆಯನ್ನು ಒಂದು ಕುಟುಂಬದ ಯೂನಿಟ್, ಅಂದರೆ ಗಂಡ, ಹೆಂಡತಿ ಮತ್ತು ಅವಿವಾಹಿತ ಮಕ್ಕಳು ಎಂದು ಅರ್ಥೈಸಲಾಗುತ್ತದೆ.
ಕಡಿಮೆ-ಆದಾಯದ ಕುಟುಂಬಗಳಿಗೆ, ಅಂದರೆ ವಾರ್ಷಿಕ ಆದಾಯ ರೂ. 3,00,000ದ ವರೆಗೆ ಇರುವ ಕುಟುಂಬಗಳಿಗೆ, ಕೊಡಲಾಗುವ ಅಡವು ಇಲ್ಲದ ಎಲ್ಲಾ ಸಾಲಗಳನ್ನು, ಅವುಗಳ ಅಂತಿಮ ಬಳಕೆ ಮತ್ತು ಅರ್ಜಿಯ/ ಪ್ರಾಸೆಸಿಂಗ್‌ನ/ ವಿತರಣೆಯ [ಫಿಸಿಕಲ್ ಅಥವಾ ಡಿಜಿಟಲ್ ಚಾನಲ್‌ಗಳ ಮೂಲಕ] ವಿಧಾನ ಯಾವುದೇ ಇರಲಿ, ಮೈಕ್ರೋಫೈನಾನ್ಸ್ ಸಾಲಗಳು ಎಂದು ಪರಿಗಣಿಸಲಾಗುತ್ತದೆ.
ಪೀರಾಮಲ್ ಕ್ಯಾಪಿಟಲ್ ಅಂಡ್ ಹೌಸಿಂಗ್ ಫೈನಾನ್ಸ್ ಲಿ. [ಪೀರಾಮಲ್ ಫೈನಾನ್ಸ್] ಕಂಪನಿಯು ಮೈಕ್ರೋಫೈನಾನ್ಸ್ ಸಾಲಗಳಿಗೆ ಸಂಬಂಧಿಸಿದಂತೆ, ಬೋರ್ಡ್ ಒಪ್ಪಿಗೆ ಕೊಟ್ಟ ಪಾಲಿಸಿಯ ಪ್ರಕಾರ ಸಾಲಗಾರರ ಅಗತ್ಯಗಳಿಗೆ ತಕ್ಕಂತೆ ಮರುಪಾವತಿಯ ಅವಧಿಯನ್ನು ಹೆಚ್ಚು-ಕಡಿಮೆ ಮಾಡುವ ಸ್ವಾತಂತ್ರ್ಯವನ್ನು ಕೊಡುತ್ತದೆ.
5-10 ಮಹಿಳಾ ಸದಸ್ಯರ ಗುಂಪಿಗೆ ಸಾಲ [ಮಹಿಳಾ ವಾಣಿಜ್ಯೋದ್ಯಮಿಗಳಿಗೆ ವಿಶೇಷ ಸಾಲ]
ಸರಳ ಮತ್ತು ಸುಲಭದ ಸಾಲದ ಪ್ರಾಸೆಸ್
ಅತ್ಯಲ್ಪ ದಾಖಲೆಪತ್ರಗಳು
ಸಾಲದ ಅವಧಿ 24 ತಿಂಗಳ ವರೆಗೆ
Loan amount From Rs. 10000 to Rs. 60000