ನೀವು ಭಾರತದಲ್ಲಿ ತೆರಿಗೆ ಪಾವತಿಸುವಂತಹ ಆದಾಯವನ್ನು ಗಳಿಸುತ್ತಿದ್ದರೆ ಪ್ಯಾನ್ ಕಾರ್ಡ್ ಹೊಂದಿರಬೇಕು. ಒಳ್ಳೆಯ ಸುದ್ದಿ ಏನೆಂದರೆ ಇದಕ್ಕಾಗಿ ರಾಷ್ಟ್ರೀಯ ಕಚೇರಿಗೆ ಹೋಗಬೇಕಾಗಿಲ್ಲ. ಪ್ಯಾನ್ ಕಾರ್ಡ್ ಅರ್ಜಿಗಾಗಿ ಆನ್ ಲೈನ್ ಪ್ರಕ್ರಿಯೆಯು ಸಾಕಷ್ಟು ಅನುಕೂಲಕರವಾಗಿದೆ.ನೀವು ಮಾಡಬೇಕಾಗಿರುವುದು ಇಷ್ಟೇ ಆನ್ ಲೈನ್ ಪ್ಯಾನ್ ಕಾರ್ಡ್ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಮತ್ತು ಪ್ರಕ್ರಿಯೆ ಶುಲ್ಕವನ್ನು ಪಾವತಿಸಿ ಒಮ್ಮೆ ಸ್ವೀಕರಿಸಿದ ನಂತರ ಅಗತ್ಯ ದಾಖಲೆಗಳ ಪ್ರತಿಗಳನ್ನು ಪರಿಶೀಲನೆ ಉದ್ದೇಶಗಳಿಗಾಗಿ ಅಂಚೆ ಮೂಲಕ ಇಲ್ಲವೇ NSDL ಅಥವಾ UTIITSL ಗೆ ಕಳುಹಿಸಬಹುದು.
ಇ-ಪ್ಯಾನ್ ಕಾರ್ಡ್ ಸಹ ಪ್ಯಾನ್ ಪುರಾವೆ ಎಂದು ನಿಮಗೆ ತಿಳಿದಿದೆಯೇ? ಅದನ್ನು ಆದಾಯ ತೆರಿಗೆ ಇಲಾಖೆ ಹೊರಡಿಸಿದೆ. ನಿಮ್ಮ ಜನಸಂಖ್ಯಾ ಮಾಹಿತಿಗಾಗಿ ಇ-ಪ್ಯಾನ್ ಕಾರ್ಡ್ ನಲ್ಲಿರುವ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಬಹುದು. ನಿಮ್ಮ ಪ್ರೊಫೈಲ್ ನಲ್ಲಿ ನಿಮ್ಮ ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿದ್ದರೆ ನೀವು ಇ-ಪ್ಯಾನ್ ಕಾರ್ಡ್ ಗೆ ಉಚಿತವಾಗಿ ಅರ್ಜಿ ಸಲ್ಲಿಸಬಹುದು.
ಅನ್ ಲೈನ್ ನಲ್ಲಿ ನಿಮ್ಮ ಇ-ಪ್ಯಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಮತ್ತು ಡೌನ್ ಲೋಡ್ ಮಾಡುವುದುನ್ನು ಕಲಿಯಿರಿ.
ಆನ್ ಲೈನ್ ನಲ್ಲಿ ಪ್ಯಾನ್ ಕಾರ್ಡ್ ಅರ್ಜಿ ಫೈಲ್ ಮಾಡಲು ಹಂತಗಳು
ನೀವು ನಿಮ್ಮ ಇ-ಪ್ಯಾನ್ ಕಾರ್ಡ್ ಅನ್ನು ಎರಡು ಪೋರ್ಟಲ್ ಮೂಲಕ ಡೌನ್ ಲೋಡ್ ಮಾಡಿಕೊಳ್ಳಬಹುದು. ಅವು ಯಾವವೆಂದರೆ NSDL ಮತ್ತು UTIISL.
ಆನ್ ಲೈನ್ ನಲ್ಲಿ NSDL ಮೂಲಕ ನಿಮ್ಮ ಇ-ಪ್ಯಾನ್ ಕಾರ್ಡ್ ಪಡೆಯಲು ಈ ಕೆಳಗೆ ನೀಡಲಾದ ಹಂತಗಳನ್ನು ಅನುಸರಿಸಿ
ಹಂತ 1: ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು NSDLಯ official website ಗೆ ಭೇಟಿ ನೀಡಿ
Step 2: Choose the correct application type and select the category you belong to, i.e., individual or associations of persons, a body of individuals, etc.
ಹಂತ 2: ಸರಿಯಾದ ಅರ್ಜಿಯನ್ನು ಮತ್ತು ನೀವು ಹೊಂದಿರುವ ವಿಭಾಗವನ್ನು ಅಂದರೆ, ವೈಯಕ್ತಿ ಅಥವಾ ಸಂಘಟನೆಗಳು, ಅಂಗ ಸಂಸ್ಥೇಯೇ ಎಂಬುದನ್ನು ಆಯ್ಕೆ ಮಾಡಿ.
ಹಂತ 3: ಆನ್ ಲೈನ್ ಪ್ಯಾನ್ ಕಾರ್ಡ್ ಅರ್ಜಿಯಲ್ಲಿ ನಿಮ್ಮ ಹೆಸರು, ಜನ್ಮದಿನಾಂಕ, ಇ-ಮೇಲ್ ವಿಳಾಸ ಮತ್ತು ಮೊಬೈಲ್ ಸಂಖ್ಯೆಯಂತಹ ಮಹತ್ವದ ವಿವರಗಳನ್ನು ಭರ್ತಿ ಮಾಡಿರಿ.
ಹಂತ 4: ನಂತರ 'Continue with the PAN Application Form' ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಹಂತ 5: ಈಗ ನಿಮಗೆ ಭೌತಿಕ ಪ್ಯಾನ್ ಕಾರ್ಡ್ ಅಥವಾ ಇ-ಪ್ಯಾನ್ ಕಾರ್ಡ್ ಆಯ್ಕೆಯನ್ನು ನೀಡಲಾಗುವುದು. ಆಯ್ಕೆ ಮಾಡಿದ ನಂತರ, ನಿಮ್ಮ 12-ಅಂಕಿಯ ಆಧಾರ್ ಸಂಖ್ಯೆಯ ಕೊನೆಯ 4 ಅಂಕಿಗಳನ್ನು ನೀವು ಒದಗಿಸಬೇಕಾಗುತ್ತದೆ.
ಹಂತ 6: ಈಗ ನೀವು ಅರ್ಜಿಯಲ್ಲಿ ಅಗತ್ಯ ವೈಯಕ್ತಿಕ ಮಾಹಿತಿಗಳು, ಸಂಪರ್ಕ ವಿವರಗಳು,ಮತ್ತು ಮತ್ತಿತರ ಅಂಶಗಳನ್ನು ಭರ್ತಿ ಮಾಡಬೇಕು.
ಹಂತ 7: ಅರ್ಜಿ ಭರ್ತಿ ಮಾಡಿದ ನಂತರ, ನೀವು ನಿಮ್ಮ ಪ್ರದೇಶ ಕೋಡ್, ಸಂಬಂಧಿತ ಕಚೇರಿ (AO) ಪ್ರಕಾರ ಮತ್ತು ಇತರ ಸಂಬಂಧಿತ ವಿವರಗಳನ್ನು ನಮೂದಿಸಬೇಕು ಮತ್ತು ದಾಖಲೆಗಳನ್ನು ಸಲ್ಲಿಸಬೇಕು ಮತ್ತು ಘೋಷಣೆಯ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
UTIISL ಮೂಲಕ ಆನ್ ಲೈನ್ ಇ-ಪ್ಯಾನ್ ಕಾರ್ಡ್ ಪಡೆಯಲು ಕೆಳಗೆ ನಮೂದಿಸಿದ ಹಂತಗಳನ್ನು ಅನುಸರಿಸಿ:
ಹಂತ 1: UTIITSL website ಗೆ ಹೋಗಿ ಮತ್ತು ‘Apply for New PAN Card (Form 49A)’ ಆಯ್ಕೆಯನ್ನು ಆರಿಸಿ.
ಹಂತ 2: ‘Physical/Digital Mode’ ಆಯ್ಕೆಮಾಡಿ ಮತ್ತು ವೈಯಕ್ತಿಕ ವಿವರಗಳನ್ನು ನಮೂದಿಸಿ
ಹಂತ 3: ಪ್ಯಾನ್ ಅರ್ಜಿಯಲ್ಲಿನ ಯಾವುದೇ ತಪ್ಪುಗಳನ್ನು ಪರಿಶೀಲಿಸಿ ಮತ್ತು ‘Submit’ಆಯ್ಕೆ ಮೇಲೆ ಕ್ಲಿಕ್ ಮಾಡಿ
ಹಂತ 4: ಪರಿಶೀಲನೆ ಮುಗಿದ ನಂತರ, ನೀವು ಆನ್ ಲೈನ್ ಗೇಟ್ ವೇ ಆಯ್ಕೆಗಳ ಮೂಲಕ ಪಾವತಿಯನ್ನು ಮಾಡಬೇಕಾಗುತ್ತದೆ. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಪಾವತಿ ದೃಢೀಕರಣನ್ನು ಸಹ ನೀನು ಸ್ವೀಕರಿಸುತ್ತೀರಿ
ಹಂತ 5: ಈಗ ನೀವು ಮುದ್ರಿತ ಫಾರ್ಮ್ ನಲ್ಲಿ 3.5 × 2.5 ಸೆಂ.ಮೀ. ಆಯಾಮಗಳೊಂದಿಗೆ ಎರಡು ಪಾಸ್ ಪೋರ್ಟ್ ಸೈಜ್ ಫೋಟೊಗಳನ್ನು ಅಂಟಿಸಿ ಮತ್ತು ಅರ್ಜಿಗೆ ಸಹಿ ಮಾಡಬೇಕಾಗುತ್ತದೆ.
ಹಂತ 6: ಅಂತಿಮವಾಗಿ ನಿಮ್ಮ ಪ್ಯಾನ್ ಅರ್ಜಿಯೊಂದಿಗೆ ನಿಮ್ಮ ಗುರುತಿನ ಪುರಾವೆ ಮತ್ತು ವಿಳಾಸ ಪುರಾವೆಯ ನಕಲನ್ನು ನೀವು ಒದಗಿಸಬೇಕು ಮತ್ತು ಅದನ್ನು ಆನ್ ಲೈನ್ ನಲ್ಲಿ ಸಲ್ಲಸಬೇಕು
ನೀವು ಅರ್ಜಿಯನ್ನು ಸಮೀಪದ UTIITSL ನಲ್ಲಿ ಸಲ್ಲಿಸಬಹುದು ಮತ್ತು ಪ್ಯಾನ್ ಕಾರ್ಡ್ ಕೊಡುವಂತೆ ವಿನಂತಿ ಸಲ್ಲಿಸಿ.
ನಿಮ್ಮ ಇ-ಪ್ಯಾನ್ ಕಾರ್ಡ್ ಡೌನ್ ಲೋಡ್
ಭೌತಿಕ ಬದಲಾಗಿ ಡಿಜಿಟಲ್ ರೀತಿಯನ್ನು ಆಯ್ಕೆ ಮಾಡುವುದರೊಂದಿಗೆ ನೀವು NSDL ಅಥವಾ UTIITSL ವೆಬ್ ಸೈಟ್ ಮೂಲಕ ನಿಮ್ಮ ಇ-ಪ್ಯಾನ್ ಕಾರ್ಡ್ ಡೌನ್ ಲೋಡ್ ಮಾಡಬಹುದು. ಇದಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹಂತಗಳನ್ನು ಅನುಸರಿಸಿರಿ. ನೀವು ಈಗಾಗಲೇ ಪ್ಯಾನ್ ಕಾರ್ಡ್ ಹೊಂದಿರುವಾಗ ನಿಮ್ಮ ಇ-ಪ್ಯಾನ್ ಕಾರ್ಡ್ ಡೌನ್ ಲೋಡ್ ಮಾಡುವ ತ್ವರಿತ ಮಾರ್ಗವನ್ನು ಇಲ್ಲಿ ತಿಳಿಸಲಾಗಿದೆ.
- Download E-PAN card ಗೆ ಭೇಟಿ ನೀಡಿ
- ನಿಮ್ಮ ಮಾನ್ಯ ಪ್ಯಾನ್, ಆಧಾರ ಸಂಖ್ಯೆ, ಮತ್ತು ಇತರ ಅಗತ್ಯ ವಿವರಗಳನ್ನು ನಮೂದಿಸಿ
- ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನಿಮ್ಮ ಆಧಾರ್ ಕಾರ್ಡ್ ನಲ್ಲಿ ನಮೂದಿಸಿದ ಮೊಬೈಲ್ ಸಂಖ್ಯೆಗೆ ಪಡೆದ OTPಯನ್ನು ಸಲ್ಲಿಸಿ
- ಯಶಸ್ವಿ ಪೂರ್ಣಗೊಂಡ ನಂತರ, ನೀವು 15-ಅಂಕಿಯ ಸ್ವೀಕೃತಿ ಸಂಖ್ಯೆಯನ್ನು ಪಡೆಯುವಿರಿ
- ನಿಮ್ಮ ಆಧಾರ್ ಸಂಖ್ಯೆಯನ್ನು ಒದಗಿಸುವ ಮೂಲಕ ನಿಮ್ಮ ವಿನಂತಿಯ ಸ್ಥಿತಿಯನ್ನು ನೀವು ಯಾವಾಗಬೇಕಾದರೂ ಪರಿಶೀಲಿಸಬಹುದು ಮತ್ತು ಯಶಸ್ವಿ ಹಂಚಿಕೆಯಲ್ಲಿ ನಿಮ್ಮ ಇ-ಪ್ಯಾನ್ ಕಾರ್ಡ್ ಅನ್ನು ನೀವು ಡೌನ್ ಲೋಡ್ ಮಾಡಬಹುದು.
- ನಿಮ್ಮ ನೋಂದಾಯಿತ ಇ-ಮೇಲ್ ಐಡಿ ಮೇಲೆ ನೀವು ನಿಮ್ಮ ಇ-ಪ್ಯಾನ್ ಕಾರ್ಡ್ ಪಡೆಯುವಿರಿ.
ಪ್ಯಾನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಕೆ- ನೆನಪಿನಲ್ಲಿಟ್ಟುಕೊಳ್ಳಬೇಕಾದ ಅಂಶಗಳು
- ಪ್ಯಾನ್ ಕಾರ್ಡ್ ಸತ್ಯಾಸತ್ಯತೆಯನ್ನು ಗುರುತಿಸಲು, ಅದು 10 ಅಲ್ಫಾನ್ಯೂಮರಿಕ್ ಅಕ್ಷರಗಳನ್ನು ಒಳಗೊಂಡಿದೆ ಮತ್ತು ನಿಮ್ಮ ಪೂರ್ಣ ಹೆಸರು, ಫೋಟೋ, ಜನ್ಮ ದಿನಾಂಕ ಮತ್ತು ನಿಮ್ಮ ಸಹಿಯನ್ನು ಹೊಂದಿದೆ ಎಂದು ನೀವು ತಿಳಿದಿರಬೇಕು.
- ನಿಮ್ಮ PAN ಕಾರ್ಡ್‌ಗಾಗಿ ಅರ್ಜಿ ನಮೂನೆಯನ್ನು ಭರ್ತಿ ಮಾಡುವಾಗ ನೀವು ನೀಡಿದ ನೋಂದಾಯಿತ ವಿಳಾಸದಲ್ಲಿ ನಿಮ್ಮ PAN ಕಾರ್ಡ್ ಅನ್ನು ನೀವು ಅಂಚೆ ಮೂಲಕ ಸ್ವೀಕರಿಸುತ್ತೀರಿ
- ನಿಮ್ಮ 12-ಅಂಕಿಯ ಆಧಾರ್ ಕಾರ್ಡ್ ಸಂಖ್ಯೆಯೊಂದಿಗೆ ನಿಮ್ಮ ಪ್ಯಾನ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ.
- ಅರ್ಜಿ ಸಲ್ಲಿಸಿದ ದಿನಾಂಕದಿಂದ 15 ದಿನಗಳ ಕೆಲಸದ ದಿನಗಳಲ್ಲಿ ನೀವು ಪ್ಯಾನ್ ಕಾರ್ಡ್ ಪಡೆಯುತ್ತೀರಿ.
- ಆದಾಯ ತೆರಿಗೆ ಕಾಯ್ದೆ, 1961 ರ ಅಡಿಯಲ್ಲಿ ಎರಡು ಪ್ಯಾನ್ ಕಾರ್ಡ್ ಗಳಿಗೆ ಅರ್ಜಿಸಲ್ಲಿಸುವುದು ಆದಾಯ ತೆರಿಗೆ ಕಾಯ್ದೆ, 1961 ರ ಅಡಿಯಲ್ಲಿ ಕಾನೂನಿನ ಉಲ್ಲಂಘನೆಯಾಗುತ್ತದೆ. ರೂ.10,000ದಂಡವನ್ನು ಪಾಲಿಸುವಂತೆ ನಿಮ್ಮನ್ನು ಕೇಳಬಹುದು. ಆದ್ದರಿಂದ ನೀವು ಎರಡು ಪ್ಯಾನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಿ
- ನಿಮ್ಮ ಪ್ಯಾನ್ ಕಾರ್ಡ್ ಅನ್ನು ಭಾರತ ದೇಶದ ವ್ಯಾಪ್ತಿಯಲ್ಲಿ ನಿಮಗೆ ತಲುಪಿಸಲು ನಿಮಗೆ ಪ್ಯಾನ್ ಅರ್ಜಿ ಶುಲ್ಕ ರೂ. 110 (GST ಸೇರಿದಂತೆ), ಆದರೆ ಭಾರತದ ಹೊರಗೆ ಪ್ಯಾನ್ ಕಾರ್ಡ್ ಕಳುಹಿಸಲು ನಿಮಗೆ ರೂ. 1020 (GST ಸೇರಿದಂತೆ) ಶುಲ್ಕ ವಿಧಿಸಲಾಗುವುದು.
- ಅಪ್ರಾಪ್ತ ವಯಸ್ಕರು ಯಾವುದೇ ತೆರಿಗೆಗೆ ಒಳಪಡದ ಆದಾಯವನ್ನು ಹೊಂದಿರದ ಕಾರಣ ಪೋಷಕರು ಅಥವಾ ಪೋಷಕರ ಪ್ಯಾನ್ ಕಾರ್ಡ್ ಅನ್ನು ಅವರು ಉಲ್ಲೇಖಿಸಬಹುದು.
ನಿರ್ಣಾಯಕ ವಿಚಾರಗಳು
ಎರಡೂ ಸಮಾನವಾಗಿ ಮಾನ್ಯವಾಗಿರುತ್ತವೆ ಎಂದು ನೀವು ತಿಳಿದಿರಬೇಕು. UTIISL ಮತ್ತು NSDL ಎರಡೂ ಸಮಾನವಾಗಿ ವಿಶ್ವಾಸಾರ್ಹವಾಗಿವೆ ಏಕೆಂದರೆ ಎರಡೂ ಆದಾಯ ತೆರಿಗೆ ಇಲಾಕೆಯ ಅಡಿಯಲ್ಲಿ ಬರುತ್ತದೆ. ನಿಮ್ಮ ಇ-ಪ್ಯಾನ್ ಕಾರ್ಡ್ ಆನ್ ಲೈನ್ ನಲ್ಲಿ ಪಡೆಯಲು ಮೇಲೆ ತಿಳಿಸಿದ ಹಂತಗಳನ್ನು ಅನುಸರಿಸಿ. ತಿಳುವಳಿಕೆಯುಳ್ಳ ಹಣಕಾಸಿನ ನಿರ್ಧಾರಗಳನ್ನು ಮಾಡಲು ನಿಮಗೆ ಸಹಾಯ ಬೇಕಾದರೆ, ಪೀರಾಮಲ್ ಫೈನಾನ್ಸ್ ನಂತಹ ಹಣಕಾಸು ತಜ್ಞರನ್ನು ಸಂಪರ್ಕಿಸಿ. ಅವರ ನಿರ್ದೇಶನ ಮಾಡಿದ ಸಾಲದ ಪರಿಹಾರವನ್ನು ಸಹ ಪರಿಶೀಲಿಸಬಹುದು ಮತ್ತು ಉತ್ತಮ ಆಯ್ಕೆಗಳಲ್ಲಿ ಆಯ್ಕೆ ಮಾಡಬಹುದು.